 |
ಮುಖಪುಟ
ಸಾರ್ವಜನಿಕ ಸಮಾಲೋಚನೆ
ಎಬಿಐಡಿಇ (ಅಬೈಡ್ - ಅಜೆಂಡಾ ಫಾರ್ ಬೆಂಗಳೂರು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಟಾಸ್ಕ್ ಫೋರ್ಸ್) ಅಂದರೆ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಪಡೆ- ಇದು ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹಾಗೂ ಕರ್ನಾಟಕ ಸರ್ಕಾರದಿಂದ ಪ್ರೇರಿತವಾದ ಯೋಜನೆ. ನೂತನ ನಗರ ಯೋಜನೆ ಮಾದರಿಯ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಬೆಂಗಳೂರು ನಿವಾಸಿಗಳಿಗೆ ಉತ್ತಮ ದರ್ಜೆಯ ಜೀವನ ಮಟ್ಟ ರೂಪಿಸುವುದು ಇದರ ಉದ್ದೇಶ.
ಬೆಂಗಳೂರು ಆಡಳಿತ, ರಸ್ತೆ ಸಂಚಾರ ನಿರ್ವಹಣೆ ಮತ್ತು ಸಾರಿಗೆ, ನಗರವಾಸಿ ಬಡವರು, ಸುಭದ್ರ ಬೆಂಗಳೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ 'ಅಬೈಡ್' ಹಲವಾರು ಕ್ರಿಯಾಯೋಜನೆಗಳು ಮತ್ತು ನೀಲನಕ್ಷೆಗಳನ್ನು ರೂಪಿಸಿದೆ.
ಈ ಹಿನ್ನೆಲೆಯಲ್ಲಿ, ಯೋಜನೆಗಳ ಕುರಿತು ಓದಿ ಪ್ರತಿಕ್ರಿಯೆ, ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ಅಬೈಡ್ ನಿಮಗೆ ಆಹ್ವಾನ ನೀಡುತ್ತದೆ.
|
 |
|